Personality Development Camp for Govt. School Children in RVK – Arkavathy

Bengaluru, Apr 4: A 5-days Personality Development Camp for Govt. School Children organised herein Rashtrotthana Vidya Kendra – Arkavathy. 75 children from 25 Govt. Schools have participated in the camp which started from Apr 1st.

ಬೆಂಗಳೂರು, ಏಪ್ರಿಲ್ 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ 5 ದಿನಗಳ ವ್ಯಕ್ತಿತ್ವ ವಿಕಸನ ಶಿಬಿರವನ್ನು ಆಯೋಜಿಸಲಾಗಿದೆ. ಏಪ್ರಿಲ್ 1ರಿಂದ ಪ್ರಾರಂಭವಾದ ಶಿಬಿರದಲ್ಲಿ ಸುತ್ತಮುತ್ತಲ 25 ಸರ್ಕಾರಿ ಶಾಲೆಗಳ 75 ಮಕ್ಕಳು ಭಾಗವಹಿಸಿದ್ದಾರೆ.

* The Seva Prakalpa of the School has been organizing the camp for free for the past 7 years.
* Children from Govt. Schools in Thanisandra, Dasarahalli, Kempapura, Kogilu Agrahara Layout, Bagalur, Yarappanahalli, Doddagubbi, Yelahanka, Nagawara, Rachenahalli, Srirampur, etc. areas around Arkavati participated.
* Necessary arrangements for the camp are handled by the parents of the children of Vidya Kendra, Matrubharti members while the sessions are managed by the school coordinator and senior teachers.
* Breakfast, fruit, drinks, lunch, as well as Matru Bhojana were organized by Matrubharati.
* Special sessions on topics like personality development, health, life, social behavior, ideal routine, service and gratitude.
* Devotional song, patriotic song, dance, drama, yoga, desi games, learning Bhagavad Gita

* ಕಳೆದ 7 ವರ್ಷಗಳಿಂದ ಶಾಲೆಯ ಸೇವಾ ಪ್ರಕಲ್ಪವು ಶಿಬಿರವನ್ನು ಉಚಿತವಾಗಿ ಆಯೋಜಿಸಿಕೊಂಡು ಬರುತ್ತಿದೆ.
* ಅರ್ಕಾವತಿಯ ಸುತ್ತಮುತ್ತಲಿನ ಥಣಿಸಂದ್ರ, ದಾಸರಹಳ್ಳಿ, ಕೆಂಪಾಪುರ, ಕೋಗಿಲು ಅಗ್ರಹಾರ ಲೇಔಟ್, ಬಾಗಲೂರು, ಯರಪ್ಪನಹಳ್ಳಿ, ದೊಡ್ಡಗುಬ್ಬಿ, ಯಲಹಂಕ, ನಾಗವಾರ, ರಾಚೇನಹಳ್ಳಿ, ಶ್ರೀರಾಂಪುರ, ಮೊದಲಾದ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳ ಮಕ್ಕಳು ಭಾಗವಹಿಸಿದ್ದಾರೆ.
* ಶಿಬಿರಕ್ಕೆ ಅಗತ್ಯ ವ್ಯವಸ್ಥೆಗಳನ್ನು ವಿದ್ಯಾಕೇಂದ್ರದ ಮಕ್ಕಳ ಪೋಷಕರು, ಮಾತೃಭಾರತಿ ಸದಸ್ಯರು ನಿಭಾಯಿಸಿದರೆ ಅವಧಿಗಳನ್ನು ಶಾಲೆಯ ಸಂಯೋಜಕರು ಹಾಗೂ ಹಿರಿಯ ಶಿಕ್ಷಕರು ನಿರ್ವಹಿಸುತ್ತಾರೆ.
* ಬೆಳಗಿನ ಉಪಾಹಾರ, ಹಣ್ಣು, ಪಾನೀಯ, ಮಧ್ಯಾಹ್ನದ ಭೋಜನ, ಜೊತೆಗೆ ಮಾತೃಭಾರತಿಯವರಿಂದ ಮಾತೃಭೋಜನವನ್ನು ಆಯೋಜಿಸಲಾಗಿತ್ತು.
* ವ್ಯಕ್ತಿತ್ವ ವಿಕಸನ, ಆರೋಗ್ಯ, ದೇಶ, ಸಾಮಾಜಿಕ ನಡವಳಿಕೆ, ಆದರ್ಶ ದಿನಚರಿ, ಸೇವೆ ಮತ್ತು ಕೃತಜ್ಞತೆ ಮೊದಲಾದ ವಿಷಯಗಳ ಬಗೆಗೆ ವಿಶೇಷ ಅವಧಿಗಳು
* ಭಕ್ತಿ ಗೀತೆ, ದೇಶಭಕ್ತಿ ಗೀತೆ, ನೃತ್ಯ, ನಾಟಕ, ಯೋಗಾಸನ, ದೇಸೀ ಆಟಗಳು, ಭಗವದ್ಗೀತೆಯ ಕಲಿಕೆ

Scroll to Top