RVK Teachers Induction Program @RVK Thanisandra (18-05-23)

ಬೆಂಗಳೂರು, ಮೈಸೂರು ರಾಷ್ಟ್ರೋತ‍್ಥಾನ ವಿದ್ಯಾಕೇಂದ್ರಗಳ ಹೊಸ ಶಿಕ್ಷಕರ ಪ್ರಶಿಕ್ಷಣ ವರ್ಗ: 2 ಮತ್ತು 3ನೇ ದಿನದ ಕಾರ್ಯಕ್ರಮಗಳು
Bengaluru, May 18: Second and third day report of a 3 days TIP Program for the Teachers of Rashtrotthana Vidya Kendras of Bengaluru and Mysuru which was held herein Rashtrotthana Vidya Kendra – Thanisandra.
ಬೆಂಗಳೂರು, ಮೇ 18: ಬೆಂಗಳೂರು ಹಾಗೂ ಮೈಸೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳಲ್ಲಿ ಹೊಸದಾಗಿ ನೇಮಕವಾಗಿರುವ ಶಿಕ್ಷಕರಿಗೆ ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಥಣಿಸಂದ್ರದಲ್ಲಿ ಏರ್ಪಡಿಸಲಾದ ಮೂರು ದಿನಗಳ ಪ್ರಶಿಕ್ಷಣ ವರ್ಗದ 2 ಹಾಗೂ 3ನೇ ದಿನದ ಕಾರ್ಯಕ್ರಮಗಳ ವರದಿ.
ಎರಡನೇ ದಿನದ ಮೊದಲ ಅವಧಿಯಲ್ಲಿ ಶ್ರೀ ಬಾರಾ ವಿಜಯಕುಮಾರ್ ಅವರು ಗುರುಪರಂಪರೆ ಮತ್ತು ಶಿಕ್ಷಕರ ಪಾತ್ರ ಹಾಗೂ ಮಹತ್ವದ ಬಗ್ಗೆ ಸವಿವರವಾಗಿ ಮಾಹಿತಿಯನ್ನು ನೀಡಿದರು.
ಎರಡನೇ ಅವಧಿಯಲ್ಲಿ ಶ್ರೀಮತಿ ಮಂಜುಳಾ ದೀದಿಯವರು ಪಂಚಮುಖಿ ಶಿಕ್ಷಣ, ಕರ್ಮ, ಜ್ಞಾನೇಂದ್ರಿಯ, ಮನಸ್ಸು, ಬುದ್ಧಿಯನ್ನು ಮೋಕ್ಷದ ಕಡೆಗೆ ಕೊಂಡೊಯ್ಯುವ ಬಗೆಗೆ ಹಾಗೂ ಪಂಚಕೋಶಗಳ ಬಗೆಗೆ ಮಾಹಿತಿ ನೀಡಿದರು.
ಅದೇ ದಿನ ಮೂರನೇ ಅವಧಿಯಲ್ಲಿ ಡಾ|| ಜಿ. ಬಿ. ಹರೀಶ್ ಅವರು ಭಾರತೀಯ ಇತಿಹಾಸದ ಅನೇಕ ಮಜಲುಗಳು, ಇತಿಹಾಸದ ಸತ್ಯಾಸತ್ಯತೆ, ಭಾರತೀಯ ಇತಿಹಾಸದ ನಿಖರತೆ, ಸ್ವಷ್ಟತೆಯ ಬಗೆಗೆ ತಿಳಿಸಿಕೊಟ್ಟರು.
ನಾಲ್ಕನೆಯ ಅವಧಿಯಲ್ಲಿ ಶ್ರೀ ಶಶಿಕುಮಾರ ಅವರು ರಾಷ್ಟ್ರೋತ್ಥಾನ ಶಾಲೆಗಳಲ್ಲಿ ನಡೆಸುವ ಹಬ್ಬಗಳು, ಆಚರಣೆಗಳು, ಸಂಪ್ರದಾಯ ಮತ್ತು ಶಿಸ್ತಿನ ಬಗೆಗೆ ಮಾಹಿತಿ ನೀಡಿದರು. ಸಂಜೆ ವಿವಿಧ ಕಡೆಯಿಂದ ಆಗಮಿಸಿರುವ ಶಿಕ್ಷಕರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಮೂರನೇ ದಿನದ ಮೊದಲ ಅವಧಿಯಲ್ಲಿ ಶ್ರೀ ರವಿಕುಮಾರ್ ಅವರು ಭಾರತೀಯ ಸಂಸ್ಕೃತಿಯ ಅನೇಕ ನೆಲೆಗಟ್ಟುಗಳಾದ ಸಂಸ್ಕಾರ, ಸಂಪ್ರದಾಯ ಮತ್ತು ಸಂಸ್ಕೃತಿಯ ಬಗೆಗೆ ಮಾಹಿತಿ ನೀಡಿದರು.
ಎರಡನೇ ಅವಧಿಯಲ್ಲಿ ಶ್ರೀಮತಿ ರೂಪ ಹಾಗೂ ಶ್ರೀಮತಿ ಅನಿತಾ ದೀದಿಯವರು ಶೈಕ್ಷಣಿಕ ಗುರಿಗಳ ಬಗೆಗೆ, ಉತ್ಕೃಷ್ಟ ಶಾಲೆ, ಮಾದರಿ ಶಾಲೆಗಳು, ಹಾಗೆಯೇ ಮಾದರಿ ಶಾಲೆಯಾಗಿ ರಾಷ್ಟ್ರೋತ್ಥಾನ ಶಾಲೆಯ ಬಗೆಗೆ ತಿಳಿಸಕೊಟ್ಟರು.
ಮೂರನೇ ಅವಧಿಯಲ್ಲಿ ಶ್ರೀ ಮಂಜುನಾಥ್ ಹಾಗೂ ಶ್ರೀ ಬಸವಕಿರಣ್ ಅವರು ಅಷ್ಟಾಂಗ ಯೋಗದ ಬಗೆಗೆ ವಿವರಿಸಿ, ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಮತ್ತು ಕ್ರಿಯಾಯೋಗಗಳ ಒಂದು ಪಕ್ಷಿನೋಟವನ್ನು ನೀಡಿದರು.
ನಾಲ್ಕನೆಯ ಅವಧಿಯಲ್ಲಿ ಶ್ರೀಮತಿ ಚಂದ್ರಕಲಾವತಿ ದೀದಿಯವರು ಶಿಕ್ಷಣದ ವಿಧಾನಗಳ ಬಗೆಗೆ ಚಟುವಟಿಕೆಯ ಮೂಲಕ ಮಾಹಿತಿ ನೀಡಿದರು. ಪಠ್ಯಕ್ರಮದ ಪ್ರವೇಶಿಕೆ, ಕಲಿಕೆಯ ಫಲಗಳು, ಭೌತಿಕ ಬೆಳವಣಿಗೆಯನ್ನು ಉದಾಹರಣೆಗಳ ಮೂಲಕ ವಿಷದೀಕರಿಸುವ ಕೌಶಲ್ಯಗಳನ್ನು ಹೇಗೆ ವಿವಿಧ ತರಗತಿಗಳಲ್ಲಿ ಬಳಕೆ ಮಾಡಬಹುದೆಂಬುದನ್ನು ತಿಳಿಸಿಕೊಟ್ಟರು.
ಸಮಾರೋಪ ಸಮಾರಭದಲ್ಲಿ ಹಲವು ಶಾಲೆಗಳ ಶಿಕ್ಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಂತರ ಶ್ರೀ ಮಹೇಶ್ವರಯ್ಯ ಅವರು ಮಾತನಾಡಿ, ಶಿಕ್ಷಕರ ಶಿಕ್ಷಣ ಪ್ರಕಲ್ಪದಲ್ಲಿ ಪಡೆದಿರುವ ಮಾಹಿತಿಯನ್ನು ತರಗತಿಯಲ್ಲಿ ಅನುಷ್ಠಾನ ಮಾಡುವಂತೆ ಕೇಳಿಕೊಂಡರು.

Scroll to Top