Bengaluru, Dec 16: Rashtrotsava 2023, Karnata Isiri was celebrated with gaiety herein Rashtrotthana Vidya Kendra – Arkavathy. Sri Ajith Hanumakkanavar, Editor-in-Chief of Asianet Suvarna News 24×7, General Secretary of Rashtrotthaana Parishat, Sri N Dinesh Hegde, Vice President of Parishat, Sri A R Dwarakanath, Administrator of Rashtrotthana CBSE Schools, Sri Maheshwaraiah, Principal of the School, Smt. Manjula and many more dignitaries were present.
ಬೆಂಗಳೂರು, ಡಿಸೆಂಬರ್ 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ರಾಷ್ಟ್ರೋತ್ಸವ 2023, ಕರ್ಣಾಟ ಐಸಿರಿಯನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸಲಾಯಿತು. ಸಮಾರಂಭದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ 24×7ನ ಪ್ರಧಾನ ಸಂಪಾದಕರಾದ ಶ‍್ರೀ ಅಜಿತ್ ಹನುಮಕ್ಕನವರ್, ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆ, ಪರಿಷತ್‍ನ ಉಪಾಧ್ಯಕ್ಷರಾದ ಶ್ರೀ ಎ. ಆರ್. ದ್ವಾರಕನಾಥ್, ರಾಷ್ಟ್ರೋತ್ಥಾನ ಸಿ.ಬಿ.ಎಸ್.ಇ. ಶಾಲೆಗಳ ಆಡಳಿತ ಪ್ರಮುಖರಾದ ಶ್ರೀ ಮಹೇಶ್ವರಯ್ಯ, ಶಾಲೆಯ ಪ್ರಧಾನಾಚಾರ್ಯರಾದ ಶ್ರೀ ಮಂಜುಳಾ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
The importance of the contribution of Karnataka and Kannadigas in preserving and developing Indian culture was to be reflected through this Rashtrotsava. The program featured music, singing by children, various pictorial models created by the teacher and children of art dept, mesmerizing dance-dramas enthralled the audience.
ಭಾರತದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕರ್ನಾಟಕದ ಹಾಗೂ ಕನ್ನಡಿಗರ ಕೊಡುಗೆಯ ಪ್ರಾಮುಖ್ಯತೆಯನ್ನು ಈ ರಾಷ್ಟ್ರೋತ್ಸವದ ಮೂಲಕ ಬಿಂಬಿಸುವುದಾಗಿತ್ತು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಸಂಗೀತ, ಗಾಯನ, ಕಲಾ ವಿಭಾಗದ ಶಿಕ್ಷಕರು ಮತ್ತು ಮಕ್ಕಳಿಂದ ರಚಿಸಲ್ಪಟ್ಟ ವಿವಿಧ ಚಿತ್ರಕಲಾ ಮಾದರಿಗಳು, ಮನಮೋಹಕ ನೃತ್ಯ-ನಾಟಕಗಳು ಪ್ರೇಕ್ಷಕರ ಮನಸೂರೆಗೊಂಡವು.