Bengaluru, Feb. 23: Third round of Prashikshana Bharati Workshop was organised by the Seva Prakalpa of Rashtrotthana Vidya Kendra – Thanisandra for 2 days, Feb 22 & 23 herein Thanisandra School Campus.
—
ಬೆಂಗಳೂರು, ಫೆ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಥಣಿಸಂದ್ರ ಶಾಲೆಯ ಸೇವಾ ಪ್ರಕಲ್ಪ ಅಡಿಯಲ್ಲಿ ಪ್ರಶಿಕ್ಷಣ ಭಾರತಿ ಪ್ರಕಲ್ಪದ 3ನೇ ಸುತ್ತಿನ ಎರಡು ದಿನಗಳ ಕಾರ್ಯಾಗಾರ ಫೆಬ್ರವರಿ 22 ಮತ್ತು 23ರಂದು ಶಾಲೆಯ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಶಿಕ್ಷಣ ಭಾರತಿ ರಾಜ್ಯ ಸಂಚಾಲಕರಾದ ಶ್ರೀ ಬಸವರಾಜ್ ಅವರು ಹಾಗೂ ಶಾಲೆಯ ಉಪ ಪ್ರಧಾನಾಚಾರ್ಯರಾದ ಶ್ರೀಮತಿ ಚಂದ್ರಕಲಾ ದೀದಿಯವರು ನೆರವೇರಿಸಿದರು.
ಈ ಕಾರ್ಯಾಗಾರದಲ್ಲಿ ಸರ್ಕಾರಿ ಶಾಲೆಗಳಿಂದ 36 ಶಿಕ್ಷಕರು ಪಾಲ್ಗೊಂಡಿದ್ದರು. ಸತತ ಮೂರನೇ ಬಾರಿಗೆ ಕಾರ್ಯಗಾರವನ್ನು ಪೂರ್ಣಗೊಳಿಸಿದ ಶಿಕ್ಷಕರ ಸಂಖ್ಯೆ ಅಧಿಕವಾಗಿದ್ದು ವಿಶೇಷವಾಗಿತ್ತು.
ಸಮಾರೋಪ ಕಾರ್ಯಕ್ರಮದಲ್ಲಿ ಆರ್.ವಿ .ಕೆ. ಶಾಲೆಗಳ ಆಡಳಿತಾಧಿಕಾರಿ ಶ್ರೀ ಮಹೇಶ್ವರಯ್ಯ ಅವರು ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದರು.