Summer Camp Started

ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಥಣಿಸಂದ್ರದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ

ಬೆಂಗಳೂರು, ಏಪ್ರಿಲ್ 7: ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಥಣಿಸಂದ್ರ ಶಾಲೆಯ ಸೇವಾ ಪ್ರಕಲ್ಪದ ಅಡಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಆಯೋಜಿಸಲಾಗಿರುವ ಉಚಿತ ಬೇಸಿಗೆ ಶಿಬಿರಕ್ಕೆ ಈ ದಿನ ಚಾಲನೆ ನೀಡಲಾಯಿತು. ಶಿಬಿರದ ಉದ್ಘಾಟನೆಯನ್ನು ರಾಷ್ಟ್ರೋತ್ಥಾನ ಪರಿಷತ್ತಿನ ಉಪಾಧ್ಯಕ್ಷರಾದ ಶ್ರೀ ಎ ಆರ್ ದ್ವಾರಕನಾಥ್‍, ಶ್ರೀ ರಾಜೇಶ್ ದೇಶ್‍ಮುಖ್, ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಮಂಜುಳಾ ಹಾಗೂ ದಾನಿಗಳಾದ ಶ್ರೀ ರವಿಶಂಕರ್ ನೆರವೇರಿಸಿದರು.

ಈ ಬೇಸಿಗೆ ಶಿಬಿರವನ್ನು 25 ಸರ್ಕಾರಿ ಶಾಲೆಗಳಿಂದ ಆಯ್ಕೆಯಾದ 50 ವಿದ್ಯಾರ್ಥಿಗಳಿಗೆ ಈ ದಿನದಿಂದ ಆರಂಭಿಸಿ ಏಪ್ರಿಲ್ 12ರ ವರೆಗೆ, ಒಟ್ಟು 5 ದಿನಗಳ ಕಾಲ ನಡೆಸಲಾಗುವುದು. ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳು, ಪುಸ್ತಕ, ಲೇಖನಿ, ಸ್ಕೂಲ್ ಬ್ಯಾಗ್, ಟೀ ಶರ್ಟ್‍ಗಳನ್ನು ಉಚಿತವಾಗಿ ನೀಡಲಾಯಿತು.

ಮಧ್ಯಾಹ್ನದ ಭೋಜನದ ವ್ಯವಸ್ಥೆಯೂ ಇದ್ದು, ಶಾಲಾ ಮಾತೃಭಾರತಿ ತಂಡದವರು ಮಾತೃಭೋಜನಕ್ಕೂ ಯೋಜನೆ ಹಾಕಿಕೊಂಡಿದ್ದಾರೆ. ಉಳಿದಂತೆ 5 ದಿನಗಳಿಗಾಗಿ ಯೋಜನಾಬದ್ಧ ವೇಳಾಪಟ್ಟಿ ತಯಾರಿಸಲಾಗಿದ್ದು, ಸಂಪನ್ಮೂಲ ವ್ಯಕ್ತಿಗಳನ್ನು ಜೋಡಿಸಲಾಗಿದೆ.

Free Summer Camp for Govt School Children in Rashtrotthana Vidya Kendra – Thanisandra

Bengaluru, Apr 7: Free Summer Camp for Govt School Children started herein Rashtrotthana Vidya Kendra – Thanisandra. Camp was inaugurated by Sri A R Dwarakanath, Vice President of Rashtrotthana Parishat, Sri Rajesh Deshmukh, Smt. Manjula, Principal of the School and the Donor, Sri Ravishankar and the camp is organised under the Seva Prakalpa of the school.

Camp is organised for 5 days, from today onward to Apr 12th, for the 50 select students of 25 Govt Schools and study material, books, pen, school bag, t shirt given to students freely.

For these 5 days lunch arranged and Mathru Bharati team of the school is also planned for Mathru Bhojana. And for 5 days planned schedule has been prepared and eminent resource persons will be engaged.

Scroll to Top