Free Summer Camp in Rashtrotthana Vidya Kendra – Thanisandra
Bengaluru: From coming April 7th to 12th, for 5 days, a Free Summer Camp is organised herein Rashtrotthana Vidya Kendra – Thanisandra, for the 50 selected students of 6th, 7th and 8th standard from 25 Govt Schools. Camp is organised under the Seva Prakalpa of the school and study material, books, pen, school bag, t shirt will be given freely. For these 5 days lunch arranged and Mathru Bharati team of the school is also planned for Mathru Bhojana. And for 5 days planned schedule has been prepared and eminent resource persons will be engaged.
Contact: 80508 86649
—
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಥಣಿಸಂದ್ರದಲ್ಲಿ ಉಚಿತ ಬೇಸಿಗೆ ಶಿಬಿರ
ಬೆಂಗಳೂರು: ಬರುವ ಏಪ್ರಿಲ್ 7 ರಿಂದ 12ರ ವರೆಗೆ, ಒಟ್ಟು 5 ದಿನಗಳ ಕಾಲ 25 ಸರ್ಕಾರಿ ಶಾಲೆಗಳಿಂದ ಆಯ್ಕೆ ಮಾಡಲಾದ 6, 7, 8ನೇ ತರಗತಿಯ ಒಟ್ಟು 50 ವಿದ್ಯಾರ್ಥಿಗಳಿಗೆ ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಥಣಿಸಂದ್ರದಲ್ಲಿ ಉಚಿತ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಶಾಲೆಯ ಸೇವಾ ಪ್ರಕಲ್ಪದ ಅಡಿಯಲ್ಲಿ ನಡೆಸುತ್ತಿರುವ ಈ ಶಿಬಿರದಲ್ಲಿ ಕಲಿಕಾ ಸಾಮಗ್ರಿ, ಪುಸ್ತಕ, ಲೇಖನಿ, ಸ್ಕೂಲ್ ಬ್ಯಾಗ್, ಟೀ ಶರ್ಟ್ ಉಚಿತವಾಗಿ ಕೊಡಲಾಗುತ್ತದೆ. ಮಧ್ಯಾಹ್ನದ ಭೋಜನದ ವ್ಯವಸ್ಥೆಯೂ ಇದ್ದು, ಶಾಲಾ ಮಾತೃಭಾರತಿ ತಂಡದವರು ಮಾತೃಭೋಜನಕ್ಕೂ ಯೋಜನೆ ಹಾಕಿಕೊಂಡಿದ್ದಾರೆ. ಉಳಿದಂತೆ 5 ದಿನಗಳಿಗಾಗಿ ಯೋಜನಾಬದ್ಧ ವೇಳಾಪಟ್ಟಿ ತಯಾರಿಸಲಾಗಿದ್ದು, ಸಂಪನ್ಮೂಲ ವ್ಯಕ್ತಿಗಳನ್ನು ಜೋಡಿಸಲಾಗಿದೆ.
ಸಂಪರ್ಕಿಸಿ: 80508 86649