Bengaluru, Nov. 16: ‘Kartika Deepotsava’ was celebrated herein Rashtrotthana Vidya Kendra – Arkavathy. Sri Chinmaya Prasanna Krishna, Divisional Pracharak, Bengaluru North Zone was graced the program. They inaugurated the program with lamp lighting and Pushpachrane, along with Gou Puja at evening and said, “If you put it, it becomes dung, if you tap it, it becomes a kurulu, if you burn it, it becomes a thorn in the nose, if you don’t tap it, it becomes a top dressing, you are a leafy human being, all those who have taken care of cows in their homes or are doing so are pious. If the sun has the power to give light to the world, then the lamp itself burns and gives light to the world. The light of the lamp is considered auspicious, it represents enlightenment, prosperity, knowledge and wisdom.” Cultural programs like dance, musical concert, mass song etc. were performed by the school children. Later, the main attraction of the Kartik Deepotsava, the lamps, were lit.
ಬೆಂಗಳೂರು, ನ. 16: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಅರ್ಕಾವತಿಯಲ್ಲಿ ‘ಕಾರ್ತಿಕ ದೀಪೋತ್ಸವ’ವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ವಿಭಾಗ ಪ್ರಚಾರಕರು, ಬೆಂಗಳೂರು ಉತ್ತರ ವಲಯದ ಶ್ರೀ ಚಿನ್ಮಯ ಪ್ರಸನ್ನ ಕೃಷ್ಣ ಅವರು ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದರು. ಸಂಜೆ ಗೋಪೂಜೆಯೊಂದಿಗೆ ದೀಪ ಪ್ರಜ್ವಲನ ಮತ್ತು ಪುಷ್ಪಾರ್ಚನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, “ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ, ಸುಟ್ಟರೇ ನೊಸಲಿಗೆ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ, ನೀನಾರಿಗಾದೆಯೋ ಎಲೆ ಮಾನವಾ, ಹಸುವಿನ ಆರೈಕೆಯನ್ನು ಯಾರೆಲ್ಲಾ ಮನೆಗಳಲ್ಲಿ ಮಾಡಿದ್ದಾರೋ, ಮಾಡುತ್ತಿದ್ದಾರೋ ಅವರೆಲ್ಲ ಪುಣ್ಯವಂತರು. ಜಗತ್ತಿಗೆ ಬೆಳಕನ್ನು ಕೊಡುವ ಶಕ್ತಿ ಸೂರ್ಯನಿಗಿದ್ದರೆ, ದೀಪ ತಾನು ಉರಿದು ಜಗಕ್ಕೆ ಬೆಳಕನ್ನು ನೀಡುತ್ತದೆ. ದೀಪದ ಬೆಳಕು ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಇದು ಜ್ಞಾನೋದಯ, ಸಮೃದ್ಧಿ, ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ” ಎಂದು ತಿಳಿಸಿದರು. ಶಾಲೆಯ ಮಕ್ಕಳು ನೃತ್ಯ, ವಾದ್ಯಗೋಷ್ಠಿ, ಸಾಮೂಹಿಕ ಗೀತೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಬಳಿಕ ಕಾರ್ತಿಕ ದೀಪೋತ್ಸವದ ಪ್ರಮುಖ ಆಕರ್ಷಣೆಯಾದ ಹಣತೆಗಳನ್ನು ಹಚ್ಚಲಾಯಿತು