ರಾ.ವಿ.ಕೇ. – ಥಣಿಸಂದ್ರದ ಸಹಾಯಕ ಸಿಬ್ಬಿಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ
ಬೆಂಗಳೂರು, ಏಪ್ರಿಲ್ 14: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯ ಈ ಶುಭಸಂದರ್ಭದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಥಣಿಸಂದ್ರದ 160 ಮಂದಿ ಸಹಾಯಕ ಸಿಬ್ಬಂದಿಗೆ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಮೂಹದ ಕರೆಸ್ಪಾಂಡೆಂಟ್ ಶ್ರೀ ಮಹೇಶ್ವರಯ್ಯ, ಥಣಿಸಂದ್ರದ ಶಾಲೆಯ ಪ್ರಧಾನಾಚಾರ್ಯೆ ಶ್ರೀಮತಿ ಮಂಜುಳಾ ಅವರು ನೆರವೇರಿಸಿದರು.
ಶಿಬಿರವು ಶಾಲೆಯ ಸೇವಾ ಪ್ರಕಲ್ಪದ ವತಿಯಿಂದ ನಡೆಯುತ್ತಿದ್ದು, ಬೆಳಗ್ಗೆ 9:00 ರಿಂದ ಮಧ್ಯಾಹ್ನ 2:00ರ ವರೆಗೆ ಇರಲಿದೆ. ಶಿಬಿರದಲ್ಲಿ ಹೃದಯ, ಕಣ್ಣು, ಹಲ್ಲು, ಬಿಪಿ, ಲಿವರ್ ಕಾರ್ಯಕ್ಷಮತೆ ತಪಾಸಣೆ ಹಾಗೂ ತಜ್ಞ ವೈದ್ಯರಿಂದ ಆಪ್ತ ಸಮಾಲೋಚನೆ ಇರಲಿದೆ.
—
Free Health Check-up Camp for Supporting Staff of RVK-Thanisandra
Bengaluru, April 14: On the auspicious occasion, Birth Anniversary celebration of Constitution Architect, Dr. B R Ambedkar, a Free Health Check-up Camp is organised for 160 Supporting Staff of Rashtrotthana Vidya Kendra – Thanisandra.
Correspondent of Rashtrotthana Vidya Kendra Group, Sri Maheshwaraiah and Principal of RVK-Thanisandra, Smt. Manjula inaugurated the camp.
Camp is organised by the Seva Prakalpa of the School and is scheduled between 9:00 am to 2:00 pm.
Heart, Eye, Teeth, BP, Liver Function Test and Consultation from with Expert Doctors organised.