An ‘Inter-Government School Yoga Competition & Vivekananda Jayanti Celebration in RVK – Arkavathy

Bengaluru, Jan. 11: An ‘Inter-Government School Yoga Competition’ was organized under the initiative of the Seva Yojana herein Rashtrotthana Vidya Kendra – Arkavathy and Vivekananda Jayanti was celebrated. Sri Govindappa, the field education officer of South Zone 4 KR Puram, and Sri Ramamurthy, the field education officer of Yalahanka North Division, graced the program. Sri Govindappa while speaking, said “Yoga maintains physical and mental stability so that concentration can be maintained. A yogic life leads to a disease-free life. Yoga helps in physical fitness enhancement, stress relief and relaxation. Improves heart rate. Helps in focus and concentration.” Sri Ramamurthy said, “Along with the curriculum, extra-curricular activities are important. Through yoga, we can maintain physical and mental stability. Adopting yoga practices can lead to a healthier, more balanced lifestyle. Embrace the journey of yoga and discover its profound impact on your well-being.” In Inter-Government School Yoga Competition, Paschima Tadasana, Vrikshasana, Ustrasana for Primary School Children and Veerabhadrasana, Chakrasana and Vakrasana for high school students were organised. 35 government schools and 365 students participated in this competition. Children who won the competition were given prizes and encouraged.

ಬೆಂಗಳೂರು, ಜ. 11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಸೇವಾ ಯೋಜನೆಯ ಪ್ರಕಲ್ಪದಡಿಯಲ್ಲಿ ಅಂತರ್ ಸರ್ಕಾರಿ ಶಾಲಾ ಯೋಗಾಸನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಹಾಗೂ ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು. ಅಭ್ಯಾಗತರಾದ ದಕ್ಷಿಣ ವಲಯ 4 ಕೆ ಆರ್ ಪುರಂ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗೋವಿಂದಪ್ಪ ಅವರು ಹಾಗೂ ಯಲಹಂಕ ಉತ್ತರ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ರಾಮಮೂರ್ತಿ ಅವರು ಆಗಮಿಸಿದ್ದರು. ಶ್ರೀ ಗೋವಿಂದಪ್ಪ ಅವರು ಮಾತನಾಡುತ್ತಾ “ಯೋಗವು ಶಾರೀರಿಕ ಮತ್ತು ಮಾನಸಿಕ ಸ್ಥಿರತೆಯನ್ನು ಕಾಪಾಡುತ್ತದೆ ಇದರಿಂದ ಏಕಾಗ್ರತೆಯನ್ನು ಕಾಪಾಡಿಕೊಳ್ಳಬಹುದು ಯೋಗಯುಕ್ತ ಜೀವನದಿಂದ ರೋಗಮುಕ್ತ ಜೀವನ ನಡೆಸಬಹುದು. ದೈಹಿಕ ಸಾಮರ್ಥ್ಯ ವರ್ಧನೆ, ಒತ್ತಡದಿಂದ ಮುಕ್ತಿ ಮತ್ತು ವಿಶ್ರಾಂತಿಗೆ ಯೋಗ ಸಹಾಯ ಮಾಡುತ್ತದೆ. ಹೃದಯ ಬಡಿತವನ್ನು ಉತ್ತಮಗೊಳಿಸುತ್ತದೆ. ಗಮನ ಮತ್ತು ಏಕಾಗ್ರತೆಗೆ ಸಹಾಯ ಮಾಡುತ್ತದೆ” ಎಂದು ತಿಳಿಸಿದರು. ಶ್ರೀ ರಾಮಮೂರ್ತಿ ಅವರು ಮಾತನಾಡುತ್ತಾ “ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಮುಖ್ಯವಾಗುತ್ತದೆ ಯೋಗಾಸನದಿಂದ ದೈಹಿಕ ಹಾಗೂ ಮಾನಸಿಕ ಸ್ಥಿರತೆಯನ್ನು ನಾವು ಕಾಪಾಡಿಕೊಳ್ಳಬಹುದು. ಯೋಗಾಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಆರೋಗ್ಯಕರ, ಹೆಚ್ಚು ಸಮತೋಲಿತ ಜೀವನಶೈಲಿಗೆ ಕಾರಣವಾಗಬಹುದು. ಯೋಗದ ಪ್ರಯಾಣವನ್ನು ಸ್ವೀಕರಿಸಿ ಮತ್ತು ನಿಮ್ಮ ಯೋಗಕ್ಷೇಮದ ಮೇಲೆ ಅದರ ಆಳವಾದ ಪ್ರಭಾವವನ್ನು ಕಂಡುಕೊಳ್ಳಿ” ಎಂದು ತಿಳಿಸಿದರು. ಅಂತರ್ ಸರ್ಕಾರಿ ಶಾಲಾ ಯೋಗಾಸನ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಪಶ್ಚಿಮ ತಾಡಾಸನ, ವೃಕ್ಷಾಸನ, ಉಷ್ಟ್ರಾಸನ ಹಾಗೂ ಪ್ರೌಢಶಾಲಾ ಮಕ್ಕಳಿಗೆ ವೀರಭದ್ರಾಸನ, ಚಕ್ರಾಸನ, ವಕ್ರಾಸನಗಳಿದ್ದು, ಈ ಸ್ಪರ್ಧೆಯಲ್ಲಿ ೩೫ ಸರ್ಕಾರಿ ಶಾಲೆಗಳು, ೩೬೫ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು.

Scroll to Top