Bengaluru, Jan. 26: The 76th Republic Day was celebrated herein Rashtrotthana Vidya Kendra – Arkavathy. The Chief Guests were warmly welcomed by the school band and the school community. After the Chief Guest hoisted the national flag, the NCC cadets performed a disciplined and impressive parade. House-wise contingents performed the parade. The Chief Guest in his speech emphasized the importance of Republic Day and the role of youth in building a strong nation. Students performed a dance in the program; creatively sketched the outline of the map of India. Earlier, certificates of appreciation were given to parents who actively participated in various programs. Rajas Srinivas Pandharpure, a student of class 9E, was recognized as a model student and honoured with a medal. The students sang a Hindi patriotic song.
ಬೆಂಗಳೂರು, ಜ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ 76 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳನ್ನು ಶಾಲಾ ಬ್ಯಾಂಡ್ ಮತ್ತು ಶಾಲಾ ಸಮುದಾಯದಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಮುಖ್ಯ ಅತಿಥಿಗಳು ರಾಷ್ಟ್ರಧ್ವಜವನ್ನು ಹಾರಿಸಿದ ನಂತರ ಎನ್‌ಸಿಸಿ ಕೆಡೆಟ್‌ಗಳು ಶಿಸ್ತುಬದ್ಧ ಮತ್ತು ಪ್ರಭಾವಶಾಲಿ ಪಥಸಂಚಲನವನ್ನು ಪ್ರದರ್ಶಿಸಿದರು. ಹೌಸ್-ವೈಸ್ ತುಕಡಿಗಳು ಪಥಸಂಚಲನವನ್ನು ಪ್ರದರ್ಶಿಸಿದವು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯವನ್ನು ಪ್ರದರ್ಶಿಸಿದರು; ಭಾರತದ ನಕ್ಷೆಯ ರೂಪರೇಷೆಯನ್ನು ಸೃಜನಾತ್ಮಕವಾಗಿ ರೂಪಿಸಿದರು. ಮುಖ್ಯ ಅತಿಥಿಗಳು ತಮ್ಮ ಮಾತುಗಳಲ್ಲಿ ಗಣರಾಜ್ಯೋತ್ಸವದ ಮಹತ್ವ ಮತ್ತು ಬಲವಾದ ರಾಷ್ಟ್ರವನ್ನು ನಿರ್ಮಿಸುವಲ್ಲಿ ಯುವಕರ ಪಾತ್ರವನ್ನು ಒತ್ತಿ ಹೇಳಿದರು. ಈ ಹಿಂದೆ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಪೋಷಕರಿಗೆ ಮೆಚ್ಚುಗೆಯ ಪ್ರಮಾಣಪತ್ರಗಳನ್ನು ನೀಡಲಾಯಿತು. 9 ಇ ತರಗತಿಯ ವಿದ್ಯಾರ್ಥಿರಾಜಸ್ ಶ್ರೀನಿವಾಸ ಪಂಢರಪುರೆಯನ್ನು ಮಾದರಿ ವಿದ್ಯಾರ್ಥಿ ಎಂದು ಗುರುತಿಸಿ ಪದಕದೊಂದಿಗೆ ಗೌರವಿಸಲಾಯಿತು. ವಿದ್ಯಾರ್ಥಿಗಳು ಹಿಂದಿ ದೇಶಭಕ್ತಿ ಗೀತೆಯನ್ನು ಹಾಡಿದರು.