Bengaluru, Dec. 14: Rashtrotthana Vidya Kendra – Arkavathy celebrated Rashtrotsava under the title ‘Saketabhigamanam’. Sri. Budihal RB, Hon’ble Judge of Karnataka State Administrative Judicial Council graced the program and inaugurated the program by lighting the lamp and addressed the program saying “Ramayana is one of the most important Hindu scriptures. This epic poem was composed by Valmiki Maharishi. Ramayana is composed of 24000 verses consisting of 7 Kanda. The story of Ramayana is mainly about Rama, son of Surya dynasty of Ayodhya, his mistress Sita and the killing of Ravana who kidnapped Sita. Composed by Maharishi Valmiki, this poem was popularized by Lava-Kusa, sons of Rama. Ramayana, one of the major literary works of ancient India, has had a profound impact on the art and culture of the Indian subcontinent. The Ramayana, one of the most important literary works of ancient India, has had a profound influence on the art and culture of the Indian subcontinent. It became an inspiration for the literature,” said Ramayana Plot, Synopsis, Structure of Ramayana, Main Characters of Ramayana, Rama Purana, Narada’s 16 Qualities of an Ideal Man, Moral Lessons of Ramayana. Then Sri Dinesh Hegde, General Secretary of Rashtrotthana Parishat gave introductory remarks stating the mission and objectives of Rashtrotthana Parishad ” The Parishad is a public charitable service organization which has been successful in delivering many publications on history, heritage, freedom fighters, biographies of great men, yoga activities to the masses”. Later, many cultural programs were performed, starting from Rath Yatra, Akhanda Bhajan, drama, dances highlighting the auspicious qualities of Rama. Around 4000 to 4500 spectators were present.
ಬೆಂಗಳೂರು, ಡಿ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ‘ಸಾಕೇತಾಭಿಗಮನಮ್’ಎಂಬ ಶೀರ್ಷಿಕೆಯಡಿಯಲ್ಲಿ ರಾಷ್ಟ್ರೋತ್ಸವವನ್ನು ಆಚರಿಸಲಾಯಿತು. ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀಯುತ ಬೂದಿಹಾಳ್ ಆರ್ ಬಿ ಅವರು ಮುಖ್ಯ ಅಭ್ಯಾಗತರಾಗಿ ಆಗಮಿಸಿ ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ”ರಾಮಾಯಣ ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು. ಈ ಬೃಹದ್ ಕಾವ್ಯವು ವಾಲ್ಮೀಕಿ ಮಹರ್ಷಿಗಳಿಂದ ರಚಿಸಲ್ಪಟ್ಟಿದೆ. ರಾಮಾಯಣವು ೨೪೦೦೦ ಶ್ಲೋಕಗಳಿಂದುಂಟಾದ ೭ ಕಾಂಡಗಳಿಂದ ಕೂಡಿದೆ. ರಾಮಾಯಣದ ಕಥೆಯು ಮುಖ್ಯವಾಗಿ ಅಯೋಧ್ಯೆಯ ಸೂರ್ಯವಂಶದ ರಾಜಪುತ್ರ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ ಕುರಿತಾಗಿದೆ. ವಾಲ್ಮೀಕಿ ಮಹರ್ಷಿಗಳಿಂದ ರಚಿತವಾದ ಈ ಕಾವ್ಯ ರಾಮನ ಮಕ್ಕಳಾದ ಲವ-ಕುಶರಿಂದ ಪ್ರಚಲಿತವಾಯಿತು. ಪ್ರಾಚೀನ ಭಾರತದ ಪ್ರಮುಖ ಸಾಹಿತ್ಯಕ ಕೃತಿಗಳಲ್ಲೊಂದಾದ ರಾಮಾಯಣವು ಭಾರತ ಉಪಖಂಡದ ಕಲೆ ಮತ್ತು ಸಂಸ್ಕೃತಿಯ ಮೇಲೆ ಆಳವಾದ ಪ್ರಭಾವ ಬೀರಿದೆ. ರಾಮನ ಕಥೆಯು ಅನೇಕ ಭಾಷೆಗಳಲ್ಲಿ ನಂತರದ ಬಹಳಷ್ಟು ಸಾಹಿತ್ಯಕ್ಕೆ ಸ್ಫೂರ್ತಿಯಾಯಿತು” ಎಂದು ತಿಳಿಸಿ, ರಾಮಾಯಣದ ಇತಿವೃತ್ತ, ಸಾರಾಂಶ, ರಾಮಾಯಣದ ರಚನೆ, ರಾಮಾಯಣದ ಮುಖ್ಯ ಪಾತ್ರಗಳು, ರಾಮಪುರಾಣ, ನಾರದ ಹೇಳುವ ಆದರ್ಶ ಮನುಷ್ಯನ 16 ಗುಣಗಳು, ರಾಮಾಯಣದ ನೀತಿ ಪಾಠ ಬಗ್ಗೆ ತಿಳಿಸಿದರು. ನಂತರ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದಿನೇಶ್ ಹೆಗ್ಡೆ ಜೀ ಯವರು ರಾಷ್ಟ್ರೋತ್ಥಾನ ಪರಿಷತ್ತಿನ ಸಂಕಲ್ಪ ಮತ್ತು ದ್ಯೇಯೋದ್ದೇಶಗಳನ್ನು ತಿಳಿಸುತ್ತಾ “ಪರಿಷತ್ತು ಒಂದು ಸಾರ್ವಜನಿಕ ದತ್ತಿ ಸೇವಾ ಸಂಸ್ಥೆಯಾಗಿದ್ದು, ಇತಿಹಾಸ, ಪರಂಪರೆ, ಸ್ವತಂತ್ರ ಹೋರಾಟಗಾರರು, ಮಹಾಪುರುಷರ ಜೀವನ ಚರಿತ್ರೆ, ಯೋಗ ಚಟುವಟಿಕೆಗಳ ಕುರಿತು ಅನೇಕ ಪ್ರಕಟಣೆಗಳನ್ನು ಜನತೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ” ಎಂಬ ಪ್ರಾಸ್ತವಿಕ ನುಡಿಗಳನ್ನಾಡಿದರು. ನಂತರ ರಥಯಾತ್ರೆ, ಅಖಂಡ ಭಜನೆಯಿಂದ ಪ್ರಾರಂಭವಾಗಿ ರಾಮನ ಷೋಡಶ ಗುಣಗಳನ್ನು ಎತ್ತಿತೋರಿಸುವ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಾಟಕ, ನರ್ತನಗಳು ಪ್ರದರ್ಶಿಸಲ್ಪಟ್ಟವು. ಸರಿ ಸುಮಾರು 4000 ರಿಂದ 4500 ವೀಕ್ಷಕರು ಉಪಸ್ಥಿತರಿದ್ದರು.