Bengaluru, Nov. 23: The Gramotthana Kartika Deepotsava program was held in Srirampur under the Gramotthana Prakalpa of Rashtrotthana Vidya Kendra – Arkavathy. Smt. Baby Radha, a teacher of Rashtrotthana Vidya Kendra – Arkavathy, graced the program. The program was presided over by the priest of Sri Narayanaswamy Temple. Sri Manjunath, the head of the Seva Prakalpa, and Sri Prashanth, a yoga teacher, were present. The program included a cultural program by the children of the village.
ಬೆಂಗಳೂರು, ನ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಗ್ರಾಮೋತ್ಥಾನದ ಪ್ರಕಲ್ಪದ ಅಡಿಯಿಂದ ಶ್ರೀರಾಮಪುರದಲ್ಲಿ ಗ್ರಾಮೋತ್ಥಾನ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ನೆರವೇರಿತು. ಮುಖ್ಯ ಅಭ್ಯಾಗತರಾಗಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯ ಶಿಕ್ಷಕಿ ಶ್ರೀಮತಿ ಬೇಬಿ ರಾಧಾ ಅವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾರಾಯಣಸ್ವಾಮಿ ದೇವಸ್ಥಾನದ ಅರ್ಚಕರು ವಹಿಸಿದ್ದರು. ಸೇವಾ ಪ್ರಕಲ್ಪದ ಪ್ರಮುಖರಾದ ಶ್ರೀ ಮಂಜುನಾಥ್, ಯೋಗ ಶಿಕ್ಷಕರಾದ ಶ್ರೀ ಪ್ರಶಾಂತ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗ್ರಾಮದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.