Bengaluru, Sept 14: A workshop was organized herein Rashtrotthana Vidya Kendra – Arkavathy for Waitress and Driver and their helpers. School ‘ROOTS’ member Dr. Bharat. R and Dr. Shushant S arrived as resource persons for the workshop and informed the school assistants about how to maintain the cleanliness of the school and personal hygiene, what should be the daily diet, how important is daily exercise and the steps to be followed while doing first aid. A total of 70 support staff of the school participated in this workshop.
ಬೆಂಗಳೂರು, ಸಪ್ಟೆಂಬರ್ 14: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಅರ್ಕಾವತಿಯಲ್ಲಿ ಪರಿಚಾರಿಕಾ ಸಿಬ್ಬಂದಿ ಮತ್ತು ವಾಹನ ಚಾಲಕರಿಗೆ ಹಾಗೂ ಅವರ ಸಹಾಯಕರಿಗೆ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಶಾಲೆಯ ‘ROOTS’ ಸದಸ್ಯರಾದ ಡಾ. ಭರತ್ ಆರ್ ಮತ್ತು ಡಾ. ಶುಶಾಂತ್ ಎಸ್ ರವರು ಆಗಮಿಸಿ ‘ಶಾಲೆಯ ಸಹಾಯಕ ಸಿಬ್ಬಂದಿಗಳು ಶಾಲೆಯ ಸ್ವಚ್ಛತೆ ಹಾಗೂ ವೈಯುಕ್ತಿಕ ಸ್ವಚ್ಛತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು, ನಿತ್ಯದ ಆಹಾರ ಕ್ರಮ ಹೇಗಿರಬೇಕು, ದಿನನಿತ್ಯ ವ್ಯಾಯಾಮ ಮಾಡುವುದು ಎಷ್ಟು ಮಹತ್ತ್ವದ್ದಾಗಿದೆ ಹಾಗೂ ಪ್ರಥಮ ಚಿಕಿತ್ಸೆಯನ್ನು ಮಾಡುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಾಗಾರದಲ್ಲಿ ಶಾಲೆಯ ಒಟ್ಟು 70 ಸಹಾಯಕ ಸಿಬ್ಬಂದಿಗಳು ಭಾಗವಹಿಸಿದ್ದರು.