Bengaluru, Mar. 14: ‘Sankalp Divas’ was organized herein Rashtrotthana Vidya Kendra – Arkavati for the students who completed their tenth and twelfth classes in the current academic year. ISRO scientist Sri Jayasimha, who was the chief guest at this program, addressed the students and said, “In addition to learning the syllabus, students of Rashtrotthana School are also being taught Indian culture and traditions that include good values. Therefore, students should implement all the good ideas learned in school in their lives and emerge as achievers who uphold the glory of Mother India. Your parents should be recognised in society through your achievements.” He said, “The life achievements of the brave pilot of the Indian Air Force, Abhinandan Varthaman, great scientists like CV Raman, Vikram Sarabhai, Satish Dhawan, etc., should be an example for us. Let us have the resolve to work hard for the progress of the nation by serving Mother India through achievements along with the syllabus learned in school, traditions and good life values.” Smt. Manjula, the Academic Head of Karnataka Rashtrotthana CBSE Schools and also the Principal of the school, taught ‘Sankalp – Pratigyavidhi’. Then the students lit the Sankalpa lamps under the guidance of the teacher. The students of classes 10 and 12 handed over the Sankalpa lamps to their juniors. In the cultural program, the Ardhanarishwara dance was performed. Then, souvenirs were distributed to all the students. The students and parents shared their experiences.
ಬೆಂಗಳೂರು, ಮಾ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಹತ್ತು ಮತ್ತು ಹನ್ನೆರಡನೆಯ ತರಗತಿಯ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗಾಗಿ ’ಸಂಕಲ್ಪ ದಿವಸ’ವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಇಸ್ರೋ ವಿಜ್ಞಾನಿ ಶ್ರೀ ಜಯಸಿಂಹ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, “ರಾಷ್ಟ್ರೋತ್ಥಾನ ಶಾಲೆಯ ವಿದ್ಯಾರ್ಥಿಗಳಿಗೆ ಪಠ್ಯ ವಿಷಯಗಳ ಕಲಿಕೆಯ ಜೊತೆಗೆ, ಉತ್ತಮ ಮೌಲ್ಯಗಳನ್ನೊಳಗೊಂಡ ಭಾರತೀಯ ಸಂಸ್ಕೃತಿ, ಸಂಸ್ಕಾರಗಳನ್ನೂ ಹೇಳಿಕೊಡಲಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿತ ಎಲ್ಲ ಉತ್ತಮ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ತಾಯಿ ಭಾರತಿಯ ಗರಿಮೆಯನ್ನು ಎತ್ತಿ ಹಿಡಿಯುವಂತಹ ಸಾಧಕರಾಗಿ ಹೊರಹೊಮ್ಮಬೇಕು. ನಿಮ್ಮ ಸಾಧನೆಯ ಮೂಲಕ ನಿಮ್ಮ ಪೋಷಕರು ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕು” ಎಂದು ಹೇಳುತ್ತಾ, “ಭಾರತೀಯ ವಾಯುಪಡೆಯ ಧೀರ ಪೈಲಟ್ ಅಭಿನಂದನ್ ವರ್ಧಮಾನ್, ಶ್ರೇಷ್ಠ ವಿಜ್ಞಾನಿಗಳಾದ ಸಿ ವಿ ರಾಮನ್, ವಿಕ್ರಮ್ ಸಾರಾಭಾಯ್, ಸತೀಶ್ ಧವನ್ ಮೊದಲಾದವರ ಜೀವನ ಸಾಧನೆಗಳು ನಮಗೆ ಮಾದರಿಯಾಗಬೇಕು. ಶಾಲೆಯಲ್ಲಿ ಕಲಿತ ಪಠ್ಯ ವಿಷಯಗಳೊಂದಿಗೆ, ಸಂಸ್ಕಾರ ಹಾಗೂ ಉತ್ತಮ ಜೀವನ ಮೌಲ್ಯಗಳೊಂದಿಗೆ ಸಾಧನೆಯ ಮೂಲಕ ತಾಯಿ ಭಾರತಿಯ ಸೇವೆ ಹಾಗ ರಾಷ್ಟ್ರದ ಏಳಿಗೆಗಾಗಿ ಶ್ರಮಿಸುವ ಸಂಕಲ್ಪವನ್ನು ನಾವು ಹೊಂದೋಣ” ಎಂದು ಕರೆ ನೀಡಿದರು. ಕರ್ನಾಟಕ ರಾಷ್ಟ್ರೋತ್ಥಾನ ಸಿ ಬಿ ಎಸ್ ಇ ಶಾಲೆಗಳ ಶೈಕ್ಷಣಿಕ ಪ್ರಮುಖರು ಹಾಗೂ ಶಾಲೆಯ ಪ್ರಧಾನಾಚಾರ್ಯರೂ ಆಗಿರುವ ಶ್ರೀಮತಿ ಮಂಜುಳಾ ಅವರು ’ಸಂಕಲ್ಪ – ಪ್ರತಿಜ್ಞಾವಿಧಿ’ ಬೋಧನೆ ಮಾಡಿದರು. ನಂತರ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದ ಮೂಲಕ ಸಂಕಲ್ಪ ದೀಪಗಳನ್ನು ಬೆಳಗಿಸಿದರು. 10 ಮತ್ತು 12ನೆಯ ತರಗತಿಯ ವಿದ್ಯಾರ್ಥಿ ಪ್ರಮಖರು ತಮ್ಮ ಕಿರಿಯರಿಗೆ ಸಂಕಲ್ಪ ದೀಪವನ್ನು ಹಸ್ತಾಂತರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅರ್ಧನಾರೀಶ್ವರ ನೃತ್ಯವನ್ನು ಪ್ರದರ್ಶಿಸಲಾಯಿತು. ತದನಂತರ ಎಲ್ಲ ವಿದ್ಯಾರ್ಥಿಗಳಿಗೆ ಸ್ಮರಣಿಕೆಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಅನುಭವಗಳನ್ನು ಹಂಚಿಕೊಂಡರು.















