Bengaluru, Jan. 10: This year too, like every year, an inter-government schools yoga competition was organized herein Rashtrotthana Vidya Kendra – Arkavathy on the occasion of Vivekananda Jayanti. Yoga therapists Sri Anil Kumar and Sri Lokesh Rai were the chief guests for the program. Addressing the students, Sri Anil Kumar said, “It is not an easy task for Rashtrotthana Vidya Kendra to adopt government schools every year and thereby teach them subjects like culture, tradition, music, yoga. Yoga is necessary for improving memory. In yoga, if the five elements along with the body and mind are connected, then the personality develops holistically. Yoga should be implemented in our lives for a better life without stress. Then a great vitality is formed in us.” He beautifully explained what is yoga and the importance of yoga in life. Sri Lokesh Rai gave information about Ashtanga Yoga and the seven chakras.
Sri Maheshwaraiah, who is also the administrator and informant of the Rashtrotthana CBSE schools, gave introductory remarks and explained the objectives of Rashtrotthana.
ಬೆಂಗಳೂರು, ಜ. 10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ವಿವೇಕಾನಂದ ಜಯಂತಿಯ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ಅಂತರ್ ಸರ್ಕಾರೀ ಶಾಲೆಗಳ ಯೋಗಾಸನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಯೋಗ ಚಿಕಿತ್ಸಕರಾದ ಶ್ರೀ ಅನಿಲ್ ಕುಮಾರ್ ಹಾಗೂ ಶ್ರೀ ಲೋಕೇಶ್ ರೈ ಅವರು ಆಗಮಿಸಿದ್ದರು. ಶ್ರೀ ಅನಿಲ್ ಕುಮಾರ್ ಅವರು ವಿದ್ಯಾರ್ಥಿಗಳನುದ್ದೇಶಿಸಿ ಮಾತನಾಡುತ್ತ, “ರಾಷ್ಟ್ರೋತ್ಥಾನ ವಿದ್ಯಾಕೇಂದ್ರವು ಪ್ರತಿ ವರ್ಷವೂ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ತನ್ಮೂಲಕ ಸಂಸ್ಕೃತಿ, ಸಂಸ್ಕಾರ, ಸಂಗೀತ, ಯೋಗವೇ ಮೊದಲಾದ ವಿದ್ಯೆಗಳನ್ನು ಹೇಳಿಕೊಡುತ್ತಿರುವುದು ಸುಲಭದ ಮಾತಲ್ಲ. ಉತ್ತಮ ಜ್ಞಾಪಕ ಶಕ್ತಿ ವೃದ್ಧಿಗೆ ಯೋಗ ಬೇಕೇ ಬೇಕು. ಯೋಗದಲ್ಲಿ ದೇಹ, ಮನಸ್ಸುಗಳೊಂದಿಗೆ ಪಂಚಕೋಶಗಳನ್ನೂ ಜೋಡಿಸಿದಲ್ಲಿ ವ್ಯಕ್ತಿತ್ವದ ಸಮಗ್ರ ಬೆಳವಣಿಗೆಯಾಗುತ್ತದೆ. ಒತ್ತಡವಿಲ್ಲದ ಉತ್ತಮ ಜೀವನಕ್ಕೆ ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ನಮ್ಮಲ್ಲಿ ಅಗಾಧವಾದ ಚೈತನ್ಯ ರೂಪುಗೊಳ್ಳುತ್ತದೆ” ಎಂದು ಹೇಳಿದರು. ಯೋಗ ಎಂದರೇನು? ಜೀವನದಲ್ಲಿ ಯೋಗದ ಮಹತ್ತ್ವಗಳೇನೆಂಬುದನ್ನು ಬಹಳ ಸುಂದರವಾಗಿ ವಿವರಿಸಿದರು.
ಶ್ರೀ ಲೋಕೇಶ್ ರೈ ಅವರು ಅಷ್ಟಾಂಗ ಯೋಗ ಹಾಗೂ ಸಪ್ತ ಚಕ್ರಗಳ ಬಗ್ಗೆ ಮಾಹಿತಿ ನೀಡಿದರು. ರಾಷ್ಟ್ರೋತ್ಥಾನ ಸಿಬಿಎಸ್ಇ ಶಾಲೆಗಳ ಆಡಳಿತಾಧಿಕಾರಿಗಳು ಮತ್ತು ಬಾತ್ಮೀದಾರರೂ ಆಗಿರುವ ಶ್ರೀ ಮಹೇಶ್ವರಯ್ಯ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ರಾಷ್ಟ್ರೋತ್ಥಾನದ ಧ್ಯೇಯೋದ್ದೇಶಗಳನ್ನು ವಿವರಿಸಿದರು.





