Bengaluru, Nov. 1: Rashtrotthana Vidya Kendra – Arkavathi celebrated Karnataka Rajyotsava under the unique theme, “Jaina Sensibility in Kannada Literature.”

At the beginning of the event, the Chief Guest, litterateur Sri L. P. Kumar, performed the flag hoisting.

Dharmik introduced the event’s theme, “Jaina Sensibility in Kannada Literature”—highlighting the immense contribution of Jainism and Jain poets to the early development of Kannada literature. Jain poets played a significant role in shaping the literary richness, cultural grandeur, and intellectual heritage of the Kannada language. Through their literary works, they introduced the principles, values, and ideals of Jainism to the general public. Jainism holds a special place in the cultural history of Karnataka. Values ​​such as non-violence (ahimsa), truth, sacrifice, detachment (vairagya), compassion, and equality are core tenets of Jainism. Jain poets and acharyas (preceptors) played a pivotal role in establishing Kannada as a literary language. Their works are invaluable for understanding the ancient heritage of Kannada literature. He briefly explained the influence that Jain philosophy, life values, and literary expressions have had on the Kannada literary tradition.


ಬೆಂಗಳೂರು, ನ. 1: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಜೈನ ಸಂವೇದನೆ’ ಎಂಬ ವಿಶಿಷ್ಟ ಶೀರ್ಷಿಕೆ ಅಡಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. 

  • ಕಾರ್ಯಕ್ರಮದ ಆರಂಭದಲ್ಲಿ ಮುಖ್ಯ ಅಭ್ಯಾಗತರಾದ ಸಾಹಿತಿ ಶ್ರೀ ಎಲ್. ಪಿ. ಕುಮಾರ್ ಅವರು ಧ್ವಜಾರೋಹಣ ನೆರವೇರಿಸಿದರು. 
  • ಧಾರ್ಮಿಕ್ ಅವರು ಕಾರ್ಯಕ್ರಮದ ಆಶಯವಾದ ‘ಕನ್ನಡ ಸಾಹಿತ್ಯದಲ್ಲಿ ಜೈನ ಸಂವೇದನೆ’ ಎಂಬ ವಿಷಯವನ್ನು ಪರಿಚಯಿಸಿ, ಕನ್ನಡ ಸಾಹಿತ್ಯದ ಪ್ರಾರಂಭಿಕ ಬೆಳವಣಿಗೆಯಲ್ಲಿ ಜೈನ ಧರ್ಮ ಮತ್ತು ಜೈನ ಕವಿಗಳ ಕೊಡುಗೆ ಅಪಾರವಾಗಿದೆ. ಕನ್ನಡ ಭಾಷೆಯ ಸಾಹಿತ್ಯಿಕ ಶ್ರೀಮಂತಿಕೆ, ಸಾಂಸ್ಕೃತಿಕ ವೈಭವ ಮತ್ತು ಜ್ಞಾನಪರಂಪರೆಯನ್ನು ರೂಪಿಸುವಲ್ಲಿ ಜೈನ ಕವಿಗಳು ಮಹತ್ವದ ಪಾತ್ರ ವಹಿಸಿದ್ದಾರೆ. ಜೈನ ಧರ್ಮದ ತತ್ತ್ವಗಳು, ಮೌಲ್ಯಗಳು ಹಾಗೂ ಆದರ್ಶಗಳನ್ನು ತಮ್ಮ ಸಾಹಿತ್ಯ ಕೃತಿಗಳ ಮೂಲಕ ಜನಸಾಮಾನ್ಯರಿಗೆ ಪರಿಚಯಿಸಿದ್ದಾರೆ. ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಜೈನ ಧರ್ಮವು ವಿಶೇಷ ಸ್ಥಾನವನ್ನು ಹೊಂದಿದೆ. ಅಹಿಂಸೆ, ಸತ್ಯ, ತ್ಯಾಗ, ವೈರಾಗ್ಯ, ಕರುಣೆ ಮತ್ತು ಸಮಾನತೆಯಂತಹ ಮೌಲ್ಯಗಳು ಜೈನ ಧರ್ಮದ ಪ್ರಮುಖ ತತ್ವಗಳಾಗಿವೆ. ಕನ್ನಡ ಭಾಷೆಯನ್ನು ಸಾಹಿತ್ಯಿಕ ಭಾಷೆಯಾಗಿ ರೂಪುಗೊಳಿಸುವ ಸಂದರ್ಭದಲ್ಲಿ ಜೈನ ಕವಿಗಳು ಮತ್ತು ಆಚಾರ್ಯರು ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಕೃತಿಗಳು ಕನ್ನಡ ಸಾಹಿತ್ಯದ ಪ್ರಾಚೀನ ಪರಂಪರೆಯನ್ನು ತಿಳಿದುಕೊಳ್ಳಲು ಅತ್ಯಂತ ಸಹಕಾರಿಯಾಗಿವೆ. ಕನ್ನಡ ಸಾಹಿತ್ಯ ಪರಂಪರೆಯ ಮೇಲೆ ಜೈನ ತತ್ತ್ವಚಿಂತನೆ, ಜೀವನಮೌಲ್ಯಗಳು ಹಾಗೂ ಸಾಹಿತ್ಯಿಕ ಅಭಿವ್ಯಕ್ತಿಗಳು ಬೀರಿದ ಪ್ರಭಾವದ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.