Bengaluru, Jan. 17: The 12th Inter-School Swimming Competition for the year 2025-26 was organized herein Rashtrotthana Vidya Kendra – Arkavati. The chief guest of the event, Sri Vidith S Shankar, an alumnus of the school and an international swimmer, addressed the competitors and said, “To excel in any sport, time, patience and proper support are essential.” Referring to his own achievements, he said, “Nothing happened overnight. I spent many years waking up early in the morning, training every day, and repeating the same routines over and over again. Some days were full of enthusiasm, while others were very difficult. However, my parents, coaches and teachers were filled with confidence and enthusiasm. They guided me properly. As a result, I was able to achieve my goals. When athletes are committed, they get good support from the society. There are many opportunities in India and abroad like scholarships, cash prizes, government jobs and college admissions. But all this comes only after many years of consistent effort and consistency. Even if you feel that the progress on this path of achievement is slow, do not stop your efforts. Quoting Bruce Lee’s quote, “I don’t fear the one who practices 10,000 things once, but I fear the one who practices the same thing 10,000 times,” he said, training means doing the same thing every day. By believing in that process, you can achieve your goal.” Then, the day’s competitions were preceded by the hoisting of the sports flag. At the end of the day, medals and awards were presented to the winners of the competitions.
ಬೆಂಗಳೂರು, ಜ. 17: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ 2025-26ನೆಯ ಸಾಲಿನ 12 ನೇ ಅಂತರ್ ಶಾಲಾ ಈಜು ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಶಾಲೆಯ ಹಳೆಯ ವಿದ್ಯಾರ್ಥಿ, ಅಂತಾರಾಷ್ಟ್ರೀಯ ಈಜು ಪಟು ಶ್ರೀ ವಿದಿತ್ ಎಸ್ ಶಂಕರ್ ಅವರು ಸ್ಪರ್ಧಿಗಳನ್ನುದ್ದೇಶಿಸಿ ಮಾತನಾಡುತ್ತಾ, “ಯಾವುದೇ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬೇಕೆಂದರೆ ಸಮಯ, ತಾಳ್ಮೆ ಮತ್ತು ಸರಿಯಾದ ಬೆಂಬಲ ಅವಶ್ಯವಾಗಿ ಬೇಕು” ಎಂದು ಹೇಳುತ್ತಾ, ತಮ್ಮ ಸಾಧನೆಯ ಕುರಿತಾದ ಉಲ್ಲೇಖವನ್ನು ಮಾಡುತ್ತಾ “ಯಾವುದೂ ರಾತ್ರೋರಾತ್ರಿ ಸಂಭವಿಸಿಲ್ಲ. ನಾನು ಹಲವಾರು ವರ್ಷಗಳಿಂದ ಮುಂಜಾನೆಯೇ ಎದ್ದು, ಪ್ರತಿದಿನ ತರಬೇತಿ ಪಡೆಯುತ್ತಾ, ಪ್ರತಿದಿನವೂ ಒಂದೇ ರೀತಿಯ ಅಭ್ಯಾಸಗಳನ್ನು ಪುನಃ ಪುನಃ ಮಾಡುತ್ತಾ ಕಳೆದಿದ್ದೇನೆ. ಕೆಲವು ದಿನಗಳು ಉತ್ಸಾಹದಿಂದ ಕೂಡಿದ್ದರೆ, ಇನ್ನೂ ಕೆಲವು ದಿನಗಳು ಬಹಳ ಕಷ್ಟಕರವಾಗಿದ್ದವು. ಆದರೂ ಎದೆಗುಂದದ ವಿಶ್ವಾಸ ಹಾಗೂ ಆಸಕ್ತಿಗೆ ನನ್ನ ಪೋಷಕರು, ತರಬೇತುದಾರರು ಮತ್ತು ಶಿಕ್ಷಕರು ನೀರೆರೆದರು. ಸರಿಯಾದ ಮಾರ್ಗದರ್ಶನ ಮಾಡಿದರು. ಅದರ ಫಲವಾಗಿ ನಾನಿಂದು ಸಾಧನೆಯನ್ನು ಮಾಡಲು ಸಾಧ್ಯವಾಯಿತು. ಕ್ರೀಡಾಪಟುಗಳು ಬದ್ಧತೆಯಿಂದ ಇದ್ದಾಗ ಅವರಿಗೆ ಸಮಾಜದಿಂದ ಉತ್ತಮ ಬೆಂಬಲ ಸಿಗುತ್ತದೆ. ಭಾರತದಲ್ಲಿ ಮತ್ತು ವಿದೇಶಗಳಲ್ಲಿ ವಿದ್ಯಾರ್ಥಿವೇತನಗಳು, ನಗದು ಬಹುಮಾನಗಳು, ಸರ್ಕಾರಿ ಉದ್ಯೋಗಗಳು ಮತ್ತು ಕಾಲೇಜು ಪ್ರವೇಶಾತಿಗಳಂತಹ ಹಲವಾರು ಅವಕಾಶಗಳಿವೆ. ಆದರೆ ಇದೆಲ್ಲವೂ ಹಲವಾರು ವರ್ಷಗಳ ಸತತ ಪ್ರಯತ್ನ ಮತ್ತು ಸ್ಥಿರತೆಯ ನಂತರವಷ್ಟೇ ಸಿಗುತ್ತದೆ. ಈ ಸಾಧನೆಯ ಪಥದಲ್ಲಿ ಪ್ರಗತಿ ನಿಧಾನವಾಗಿದೆ ಎಂದು ಅನಿಸಿದರೂ ಸಹ, ನಿಮ್ಮ ಪ್ರಯತ್ನವನ್ನು ನಿಲ್ಲಿಸಬೇಡಿ. ʼ10,000 ವಿಷಯಗಳನ್ನು ಒಮ್ಮೆ ಅಭ್ಯಾಸ ಮಾಡುವವನಿಗೆ ನಾನು ಹೆದರುವುದಿಲ್ಲ, ಆದರೆ ಒಂದೇ ವಿಷಯವನ್ನು 10,000 ಬಾರಿ ಅಭ್ಯಾಸ ಮಾಡುವವನಿಗೆ ನಾನು ಹೆದರುತ್ತೇನೆ’ ಎಂಬ ಬ್ರೂಸ್ ಲೀ ಅವರ ಉಕ್ತಿಯನ್ನು ಉಲ್ಲೇಖಿಸುತ್ತಾ, ತರಬೇತಿ ಎಂದರೆ ಪ್ರತಿದಿನ ಒಂದೇ ಕೆಲಸವನ್ನು ಮಾಡುವುದು. ಆ ಪ್ರಕ್ರಿಯೆಯ ಮೇಲೆ ನಂಬಿಕೆ ಇಡುವ ಮೂಲಕ ತಮ್ಮ ಗುರಿಯನ್ನು ಸಾಧಿಸಬಹುದು” ಎಂದು ಹೇಳಿದರು. ನಂತರ ಕ್ರೀಡಾ ಧ್ವಜಾರೋಹಣ ಮಾಡುವ ಮೂಲಕ ಈ ದಿನದ ಸ್ಪರ್ಧೆಗಳಿಗೆ ಮುನ್ನಡಿಯಿಡಲಾಯಿತು. ದಿನದ ಕೊನೆಯಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪದಕ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.






