Bengaluru, Nov. 6: The 69th ‘Karnataka Rajyotsava’ was celebrated under the title ‘150th Celebration of Panje Mangesharaya’ herein Rashtrotthana Vidya Kendra – Arkavathy. Former President of Kannada Sahitya Parishad, Nadoja Sri Manu Baligar, graced the program and hoisted the flag. He told the children about Panje Mangesharay’s ideal qualities and his contribution to Kannada, equality in education and simplicity in life. Also, the cultural programs were organized very elegantly.
ಬೆಂಗಳೂರು, ನ. 6: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ‘ಪಂಜೆ ಮಂಗೇಶರಾಯರ 150ರ ಸಂಭ್ರಮ’ ಎಂಬ ಶೀರ್ಷಿಕೆಯ ಅಡಿಯಲ್ಲಿ 69ನೆಯ ‘ಕರ್ನಾಟಕ ರಾಜ್ಯೋತ್ಸವ’ವನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ನಾಡೋಜ ಶ್ರೀ ಮನು ಬಳಿಗಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣವನ್ನು ನೆರವೇರಿಸಿದರು. ಪಂಜೆ ಮಂಗೇಶರಾಯರ ಆದರ್ಶ ಗುಣಗಳನ್ನು ಹಾಗೂ ಅವರು ಕನ್ನಡಕ್ಕೆ ಕೊಟ್ಟ ಕೊಡುಗೆಯನ್ನೂ, ಶಿಕ್ಷಣದಲ್ಲಿ ಸಮಾನತೆ, ಜೀವನದಲ್ಲಿ ಸರಳತೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ಮಕ್ಕಳಿಗೆ ತಿಳಿಸಿದರು. ಹಾಗೆಯೇ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಸೊಗಸಾಗಿ ಮೂಡಿಬಂದವು.